ಬೆಳಗಾವಿ- ಬೈಲಹೊಂಗಲ ತಾಲೂಕಿನ ವಣ್ಣೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾಗಿ 25 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಎಸ್ ಐ ಮಿರಜನ್ನವರ ಅವರಿಗೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬುದ್ಧ ಬಸವ ಅಂಬೇಡ್ಕರ್ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರು ಮಾರುತಿ ಕೆಳಗೇರಿ, ಮಲ್ಲಸರ್ಜ ಮಚ್ಚೇದ, ನಾಗರಾಜ ಕಾಗತಿ, ಹನುಮಂತ ದೊಡ್ಡನ್ನವರ, ಮಹಾದೇವ ಕೆಳಗೇರಿ ಯವರಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ನಾನಾ ಸಾಹೇಬ್ ದೇಸಾಯಿ, ವಣ್ಣೂರ ಗ್ರಾಮದ ಶಾಲಾ ಗುರುಗಳು, ಶಾಲೆಯ ಮಕ್ಕಳು ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.







